Vaishnavi Bagayi   (Vaishnavi Bagayi)
35 Followers · 23 Following

✍️✍️
Joined 4 July 2018


✍️✍️
Joined 4 July 2018
3 FEB 2022 AT 12:37

Yes I am girl !

Born with you, played with you,
But men why do you, discriminate me ?
Dear men, if I am born as a girl,
It's not my fault, infact it's your fault.
Yes I am a girl ! And I am proud to be.

In every field I compete with you equally,
But why do you still treat me cruelly ?
If you work in office for 8 hours,
I work at home and office for 16 hours.
Yes I am a girl ! And I am proud to be.

You talk about women empowerment,
But you kill me in the womb brutally.
You men wish to marry a virgin girl,
And take away even girl child's virginity.
Yes I am a girl ! And I am proud to be.

My body, dress or appearance isn't wrong,
It is your mentality that is wrong.
Respect every girl, because tomorrow,
Your mother, sister or wife may be in danger.
Yes I am a girl ! And I am proud to be.

-


14 DEC 2021 AT 0:21

ಕವಿತೆ

ಏನೆ ಬರಿಯಲು,
ಯಾವುದೇ ನೆಪ ಬೇಕಿಲ್ಲ,
ಹೊಸ ಕಾರಣ ಬೇಕಿಲ್ಲ.
ನಿನ್ನ ನೆನೆದರೇ ಸಾಕು,
ತಾನಾಗೇ ಹುಟ್ಟಿಕೊಳ್ಳುತ್ತೇ ಕಲ್ಪನೆಗಳು.

ಕಣಂಚಲ್ಲಿ ಬರೊ ಕಣೀರು ನೀನೇ,
ಮುಖದಲ್ಲಿ ಮುಡೋ ನಗುವು ನೀನೇ.
ನನ್ನ ಮಾತು ನೀನೇ,
ನನ್ನ ಬರವಣಿಗೆಯು ನೀನೇ.

ಎಷ್ಟೇ ನಿನ್ನ ನೋಡಿದರು,
ನನ್ನ ಮನಸು ಹೇಳುವುದಿಲ್ಲ ಸಾಕು.
ಸುಮ್ಮನಿರೋಕ್ಕು ಆಗದೆ,
ಹೇಳಿಕೊಳ್ಳಲು ಆಗದೆ,
ಈ ನಾಲ್ಕು ಸಾಲುಗಳು ಬರೆದೆ.

-


22 JUL 2021 AT 20:08

ನನ್ನ ರಾಜಕುಮಾರ ನೀನೇ

ನನ್ನ ರಾಜಕುಮಾರ ನೀನೇ,
ನನ್ನ ಕಣ್ಣಲ್ಲಿ ಮಿನುಗುತಿರುವುದು ನೀನೇ.
ಅನ್ನುವುದು ಚೆನ್ನಾಗಿ ಗೊತ್ತು ನನಗೆ.

ಹಿಡಿದುಕೊ ನನ್ನ ಕೈ ಎಲ್ಲರ ಮುಂದೆ,
ನಾನು ಸುಮ್ಮನೆ ಬರುವೆ ನಿನ್ನ ಹಿಂದೆ.
ಇನ್ನು ಮುಂದೆ ನಾನು ನೀನು ಒಂದೇ.

ಬರೆಯುವೆ ಈ ನಾಲ್ಕು ಸಾಲುಗಳ್ಳನ,
ಮುಟ್ಟುವೆ ನಿನ್ನ ಹೃದಯವನ್ನ,
ನಿನ್ನ ನೋಡಿ ನಾಚುವೇನು ಚಿನ್ನ.

ನಿನ್ನ ಜೊತೆ ಇದ್ದ ಈ ಸಮಯ
ಆದರೆ ಆಗಲಿ ಪ್ರಳಯ,
ನಾನು ಇರುವೆ ನಿನ್ನ ಜೊತೆ ಕೊನೆಯ ತನಕ.

-


22 JUL 2021 AT 19:46

ಜನನಾಯಕ

ನಾನು ಒಬ್ಬ ಒಳ್ಳೆ ಜನನಾಯಕ,
ಆದರೂ ನಾನು ಅಲ್ಲ ಒಳ್ಳೆ ಜನವೆವಕ.
ನಾನು ನೀಡುತ್ತೇನೇ ನಿಮಗೆ ಅಕ್ಕಿ ಗೋದಿ ಎಲ್ಲಾ,
ಅದ್ರಲ್ಲಿ ಸೇರಿಸಿ ಸ್ವಲ್ಪ ಕಡಿ ಕಸವನ್ನ.
ನೀವು ನಡೆಸಿ ಸಭೆ,
ನಾನು ಮಾಡುತೇನೆ ನಿದ್ದೆ.
ನಾನು ಜಾತಿ ಮತ ನಿರ್ಮೂಲಸ್ತೇನೆ,
ಆದರೆ ಸ್ವಲ್ಪ ಜನರಿಗೆ ವಿಶೇಷ ಆಧ್ಯತೆ ನಿಡುತ್ತೇನೆ.
ನೀಡುತ್ತೇನೆ ಬಿಸಿ ಊಟ ಬನ್ನಿ ಶಾಲೆಗೆ,
ಆಮೇಲೆ ಹೋಗಿ ಆಸ್ಪತ್ರೆಗೆ.
ನನಗೆ ನೀಡಿ ನಿಮ್ಮ ಅಮೂಲ್ಯ ಮತವನ್ನ,
ಆಮೇಲೆ ತೋರಿಸುತ್ತೇನೆ ನಿಮಗೆ ಒಂದು ಗತಿಯನ್ನ.
ಜನರೇ ನಾನು ನಿಮ್ಮ ಪರ,
ಮರೆಯದೆ ತಂದು ಹಾಕಿ ಪರಾ.
ನಾನು ನಿಮ್ಮ ಮನೆಯ ಮಗ ಆಯೆಕೆ ಮಾಡಿ ನನ್ನನ,
ನಾನು ಹಾಡುತ್ತೇನೆ ಅದೇ ರಾಗ ಅದೇ ಹಾಡನ್ನ.

-


22 JUL 2021 AT 19:34

ನನ್ನ ನಿನ್ನ ಮಿಲನ

ಸೂರ್ಯ ಹುಟ್ಟಿ, ಸೂರ್ಯ ಮುಳುಗುವ ವರೆಗು,
ನಾ ಹುಟ್ಟಿ, ನಾ ಸಾಯುವ ವರೆಗು.
ನೀ ಬಂದೆ ನನ್ನ ಬಳಿಗೆ ಬೆಳಕಾಗಿ,
ಸಾಯುವ ಮೀನಿಗೆ ನಿರಾಗಿ.
ಇದೆ ನಿಜವಾದ ನನ್ನ ನಿನ್ನ ಮಿಲನ.

ನೀರು ಹರಿಯುತ್ತೆ ಇರುತ್ತೆ, ಧಡ ಸೇರುವ ತನಕ,
ನನ್ನ ಪ್ರೀತಿ ನಿನ್ನ ಮನ ಸೇರುವ ತನಕ.
ವ್ರತ ಮಾಡಿದವರಿಗೆ ಚಂದ್ರ ಬರುವ ತವಕ,
ನನಗೆ ನಿನ್ನ ನೋಡುವ ತವಕ.
ಇದೆ ನಿಜವಾದ ನನ್ನ ನಿನ್ನ ಮಿಲನ.

ಆತ್ಮಕ್ಕೆ ಶಾಂತಿ ಸಿಗೋದು ಸತ್ತ ಮೇಲೆ,
ನನಗೆ ತೃಪ್ತಿ ಸಿಗೋದು ನೀ ನನಗೆ ಸಿಕ್ಕ ಮೇಲೆ.
ನಮಗೆ ಇರೊದು ಈ ಭೂಮಿ ಮೇಲೆ ಒಂದೇ ಜನ್ಮ.
ನನಗೆ ಸಾಲೋದಿಲ್ಲ ನಿನ್ನ ಜೊತೆ ಏಳ್ - ಏಳು ಜನ್ಮ.
ಇದೆ ನಿಜವಾದ ನನ್ನ ನಿನ್ನ ಮಿಲನ.

-


22 JUL 2021 AT 16:45

ಕನ್ನಡ

ತಂದೆಯಿಂದ ಆಯಿತು ಪ್ರಾರಂಭ,
ಕನ್ನಡದ ಪ್ರಯಾಣ.
ಶಾಲೆಯಲ್ಲಿ ಕಲಿಯಲಿಲ್ಲ,
ತಂದೆ ಕಲಿಯದೇ ಬಿಡಲಿಲ್ಲ.
ಕಲ್ತಿದ್ದು ಕೈಬಿಡದು,
ಎಂದು ಹೇಳಿದರು.
ತಡವಾಗಿ ಶುರು ಮಾಡಿದೆ,
ರಭಾಸದಿಂದ ಮುನ್ನುಗಿದ್ದೆ.
ಪ್ರೀತಿಯಿಂದ ಕಲಿತೆ,
ಕನ್ನಡ ಭಾಷೆ.
ಅಂಬೆಗಾಲಲ್ಲಿ ಒಳಗಡೆ ಹೋದೆ,
ನಡ್ಕೊಂಡು ಹೊರಗಡೆ ಬಂದೆ.
ತೊಗೊಂಡು ಹೋದೆ ಒಂದು ಕವಿತೆ,
ಬರುವಾಗ ಜೊತೆ ತಂದೆ ಸುಮಾರು ಕವಿತೆ.
ಹೋಗುವಾಗ ಅದು ಆಗಿತ್ತು ಬರಿ,
ನಾಗಸುಧೆ ಜಗಲಿ,
ಹೊರಬಂದಾಗ ಅವರ ನುಡಿ,
ತುಂಬಿತ್ತು ಮನಸಿಗೆ ಸ್ಫೂರ್ತಿ,
ಆಯಿತು ನನ್ನ ಕವಿತೆಗಳ ಮುನ್ನುಡಿ.
ದೇವರೇ ಹೀಗೆ ಸುರಿಯಲಿ,
ನನ್ನ ಮೇಲೆ ಕನ್ನಡದ ಪ್ರೀತಿ.

-


22 JUL 2021 AT 16:36

ವೃತ್ತಿ

ಇರಲಿ ಯಾವುದೇ ವೃತ್ತಿ,
ನಾವು ಇಷ್ಟಪಡ್ಬೇಕು ಮನಸ್ಫೂರ್ತಿ.
ನಮ್ಮ ಕೆಲಸ ಜೇವನದ,
ಒಂದು ಭಾಗ,
ತೊಗೊಂಡರೆ ಪೂರ್ತಿ ಜಾಗ,
ಸಿಗುವವುದಿಲ್ಲ ಸ್ವಲ್ಪಾನು ವಿರಾಮ.
ಪ್ರೀತಿಸಿದರೆ ವೃತ್ತಿ,
ತಂದ್ಕೋದುತ್ತೆ ಕೀರ್ತಿ.
ತೊಗೊಂಡರೆ ನಿವೃತ್ತಿ,
ಸಿಗುವುದು ಕೆಲ್ಸದಿಂದ ಮುಕ್ತಿ.
ಹೆಸರು ಬೇರೆ-ಬೇರೆ ಆದರೂ,
ಎಲ್ಲರು ಮಾಡುವರು,
ಉಡುವ ಬಟ್ಟೆಗಾಗಿ,
ಎರಡು ತುತ್ತು ಹೊಟ್ಟೆಗಾಗಿ.
ಜೇವನದ ಎಷ್ಟೋ ಘಳಿಗೆಯಲ್ಲಿ,
ಗುರುತು ಸಿಗೋದು ನಮ್ಮ ಕೆಲಸದಿಂದಾಗಿ.
ಏನೆ ಏರು ಫೇರು ಆಗಲಿ,
ಕೈ ಬಿಡುವುದಿಲ್ಲ ನಮ್ಮ ವೃತ್ತಿ.
ಅದಕ್ಕೆ ನನ್ನ ವೃತ್ತಿ, ನನ್ನ ಶಕ್ತಿ,
ಅದರಲ್ಲೇ ಸಿಗೋದು ನನಗೆ ತೃಪ್ತಿ.

-


22 JUL 2021 AT 16:20

ಖಾಲಿ ಮನೆ

ಖಾಲಿ ಮನೆ ಅಂದರೆ,
ಖಾಲಿ ಜಾಗ, ಖಾಲಿ ಗೋಡೆ.
ಮನೆ ತುಂಬಾ ಧೂಳು,
ಸ್ವಚ್ಛ ಮಾಡೋದು ಒಂದು ಗೋಳು.
ಹೊಸ ಮನೆ ಅಂದರೆ,
ಹೊಸ ಚಾಲನೆ.
ಮನೆ ಹಳೆಯದಾದರೆ,
ಅದಕಿರುತ್ತೆ ನೂರು ಕಥೆ.
ಇದ್ದರೆ ವಳೆಯವರ ವಾಸ,
ಆಗುತ್ತೆ ಅರಮನೆ ಆ ವಿಳಾಸ.
ಹುಷಾರ್ ಅಣ್ಣ,
ಆಗ್ಬಹುದು ದೆವ್ವ ಭೂತಗಳ ಕಾಟ.
ಅದೇ ಮನೆ, ಅದೇ ಗೋಡೆ,
ಜನ ಬೇರೆ, ಇರೋ ರೀತಿ ಬೇರೆ.
ಇದ್ದರೆ ವಿಶ್ವಾಸ್ ಪ್ರೀತಿ,
ಮನೆ ಆಗುವುದು ಪೂರ್ತಿ.

-


22 JUL 2021 AT 15:39

ಪ್ರವಾಸ

ನನಗೆ ಎಲ್ಲಕಿಂತ,
ಇಷ್ಟ ಅಂದರೆ ಪ್ರವಾಸ.
ಸ್ನೇಹಿತರ ಜೊತೆ ಇರಲಿ,
ಮನೆಯವರ ಜೊತೆ ಇರಲಿ,
ಹೇಗಾದರೂ ಮಾಡಬೇಕು ಪ್ರವಾಸ.
ಬಾಲ್ಯದಲ್ಲಿ ಸುತ್ತಾಡಿದ ಜಾಗ,
ಮರೆಯಕ್ಕೇ ಆಗದ ಅನುಭವ.
ಹಾಡುತ್ತ, ಕುಣಿಯುತ್ತ,
ಹೋದೆವು ಮಜಾ ಮಾಡುತ್ತ.
ನೋಡಿದೆವು ಸುಮಾರು ಸ್ಥಳ,
ಊರಿಂದ ಊರು ಸಾಗುತ್ತಾ.
ಎಲ್ಲರು ರಾತ್ರಿಯ ವೇಳೆ,
ಬೆಳದಿಂಗಳಲ್ಲಿ ಆಡಿದ ಅಕ್ಷರಮಾಲೆ.
ಬೆಟ್ಟದ ಮೇಲೆ ಹೋಗುವಾಗ,
ಪಟ್ಟ ಕಷ್ಟ, ಆದ ಆಯಾಸ.
ಪುಟ್ಟ ಪುಟ್ಟ ವಿಷಯಗಲ್ಲಿ,
ಸಿಕ್ಕಿತು ಖುಷಿ.
ಅವಾಗ ಅರಿವೇ ಆಗಲಿಲ್ಲ,
ಕಟ್ಟುತಿದೆವು ನಾವು ನೆನಪಿನ ಮನೆಯನ್ನ.

-


22 JUL 2021 AT 14:36

ಗಾಯ

ಸೈಕಲಿಂದ ಬಿದ್ದು,
ಅದ ಆ ನೋವು,
ಸೈಕಲ್ ಅಲ್ಲೇ ಬಿಟ್ಟು,
ನನ್ನದೇ ತಪ್ಪ್ ಇದ್ದರು,
ಅಳುತ್ತ ಮನೆಗೆ ಬಂದೆ.
ಅಪ್ಪನ ನೋಡಿ,
ಆಗಿ ಹೋಯಿತು ಮಾಯಾ,
ನನಗಾದ ಗಾಯ.
ಈಗ ಯಾರೇ ತಪ್ಪು ಮಾಡಿದರು,
ನನಗೆ ಆಗೋದು ನೋವು.
ಯಾರೇ ನನಗೆ ಬೇಕಾದರು,
ನಾನೆ ಹೋಗಬೇಕು ಹುಡುಕಿಕೊಂಡು.
ಅವಾಗ ಅದ ವೇದನೆ,
ದೇಹಕ್ಕೆ ಅದ ಬೇನೆ.
ಈಗ ಆಗುವ ನೋವುಗಳು,
ಮನಸಿಗೆ ಆಗೋ ಗಾಯಗಳು.
ಇದು ಮಸದೆ ಹಾಗೆ,
ನಾನಲ್ಲೇ ಉಳಿದುಕೊಂಡಿದೆ.
ಬಾಲ್ಯದಲ್ಲಿ ಸುಮ್ಮನೆ ಅತ್ತು,
ಈಗ ನಿಜವಾಗಿ ಅಳು ಬಂದರು,
ನಗುತಲ್ಲೇ ಸಾಗಬೇಕು.

-


Fetching Vaishnavi Bagayi Quotes