ಹೊರಟಿರುವೆ ಬೆನ್ನತ್ತಿ ಕನಸುಗಳ ಹಿಂದೆ,
ನನಸಾಗುವುದೆಂದೋ ಗೊತ್ತಿಲ್ಲವೆನೆಗೆ..!
ಕನಸಲ್ಲೂ ಮನಸಲ್ಲೂ ದಿಟ್ಟತೆಯ ಶಕ್ತಿ,
ಛಲ ಬಿಡದೆ ಪಡೆಯುಲು ಪಣ ತೊಡುವೆ..!
ಭುಜದಿ ನಕ್ಷತ್ರಗಳ ಇಳಿಸುವ ಆಸೆ
ಕೈಯಲ್ಲಿ ಸ್ನೈಪರ್ ರೈಫಲ್ ಹಿಡಿಯೋ ಆಸೆ
ಹಸಿರು(ಆಲಿವ್) ಬಣ್ಣವ ಉಸಿರಾಗಿಸೋ ಆಸೆ
ಭಾರತೀಯ ವೀರಪುತ್ರಿ ಆಗುವ ಆಸೆ..!
ಗಡಿನುಸುಳುವ ಉಗ್ರರ ನೆತ್ತರ
ಭಾರತಾಂಬೆಯ ಪಾದಗಳಿಗರ್ಪಿಸಲು,
"ಅಮರ ಸೈನಿಕ"ರಿಗರ್ಪಿಸಿದ ಪುಷ್ಪಗಳ
ತಾಯಿಯ ಮುಡಿಗಿಡಲು ಸಾರ್ಥಕ ಈ ಬದುಕು..!
ನಮ್ಮವರ ರಕ್ಷಿಸುತ್ತಾ , ದೇಶದ್ರೋಹಿಗಳ ಶಿಕ್ಷಿಸುವ
ನರಿಬುದ್ಧಿ ಜೀವಿಗಳ ಹೊಡೆದುರುಳಿಸುವ,
ಕಾಯಕದಲ್ಲೇ ಉಸಿರು ನಿಂತರೆ ಸಾರ್ಥಕ ಈ ಬದುಕು.!
ಗೌರವದಿ ಬೀಳ್ಕೊಟ್ಟ ಅಂತಿಮನಮನದಲ್ಲೇ,
ಮತ್ತೆ ಹುಟ್ಟುವಾಸೆ ಭಾರತೀಯ ನಾರಿಯಾಗಿ..!
ಹೊರಟಿರುವೆ ಬೆನ್ನತ್ತಿ ಕನಸುಗಳ ಹಿಂದೆ
ನನಸಾಗುವುದೆಂದೋ ಗೊತ್ತಿಲ್ಲವೆನಗೆ..!
-