Ravikantha Kundapura  
194 Followers · 3 Following

Fb: Ravikantha Kundapura, twitter: @Ravikantha27
Joined 25 July 2017


Fb: Ravikantha Kundapura, twitter: @Ravikantha27
Joined 25 July 2017
4 OCT 2023 AT 10:56

Habitat ಬದಲಾಯಿಸುವುದಕ್ಕಿಂತ
habit ಬದಲಿಸಿಕೊಳ್ಳುವುದೇ ಉತ್ತಮ.

-


28 SEP 2023 AT 22:16

ಬದುಕಿದ್ದಾಗ
ಅವನು
ಹಲವರನ್ನು
ಹಂಗಿಸುತ್ತಿದ್ದ..
"ಓ ಬಾಡಿಗೆ ಮನೆನಾ?";
ಅವನ ಶವಸಂಸ್ಕಾರವಾದ
ಜಾಗಕ್ಕೊಮ್ಮೆ ಹೋಗಿ ನೋಡಿದೆ,
ಅಲ್ಲೊಂದು ಸಮಾಧಿಯ ಕಂಡು
ನಾನೂ ಅವನ ಹಾಗೇ ಉದ್ಗರಿಸಿದೆ,
"ಓ 'body'ಗೆ ಮನೆನಾ?"

-


14 JUN 2023 AT 11:05

ಕಿಸೆ ಖಾಲಿ ಇದ್ದಾಗ ಸುತ್ತಲಿನವರು ಹೇಗೆ ಎಂಬುದು ಅರ್ಥವಾಗುತ್ತದೆ, ಒಂದೈದು ನಿಮಿಷ ಏನನ್ನೂ ಯೋಚಿಸದೆ ತಲೆ ಖಾಲಿ ಇರಿಸಿಕೊಂಡಾಗ ನೆಮ್ಮದಿ ಅಂದರೇನು ಅಂತ ಅರ್ಥವಾಗುತ್ತದೆ, ಒಂದಿಡೀ ದಿನ ಹೊಟ್ಟೆ ಖಾಲಿ ಇರಿಸಿಕೊಂಡಾಗ ಆ ಅನುಭವದ ಆನಂದ ಅರ್ಥವಾಗುತ್ತದೆ.
ಅಷ್ಟಕ್ಕೂ ಈ ಭೂಮಿ, ಜೀವಸಂಕುಲ ಸೃಷ್ಟಿಯಾಗಿದ್ದೇ ಒಂದು ದೊಡ್ಡ ಖಾಲಿಯಿಂದ.. ಆದರೂ ಎಲ್ಲರಿಗೂ ಖಾಲಿ ಆದೀತೆಂಬ ಭೀತಿ, ಖಾಲಿ ಆದೇವೆಂಬ ಭಯ. ಗೊತ್ತಿದೆ ಎಲ್ಲರಿಗೂ.. ಬರುವಾಗಲೂ ಖಾಲಿ, ಹೋಗುವಾಗಲೂ ಖಾಲಿ, ಇರುವವರೂ ಒಂದು ದಿನ ಆಗುವರು ಖಾಲಿ.
ಖಾಲಿಯಾಗುವವರೆಗೂ ಇರಲಿ ಆಗಾಗ ನಾವೇ ಖಾಲಿ ಆಗಿಸಿಕೊಳ್ಳುವ ಖಯಾಲಿ.
ಏಕಾದಶಿಯ ಶುಭಾಶಯಗಳು.

-


27 MAY 2023 AT 9:44

ಇನ್ನೊಬ್ಬರ ಜಾಗಕ್ಕೆ ಬೇಲಿ ಹಾಕಿಕೊಳ್ಳಬಹುದು,
ಇನ್ನೊಬ್ಬರ ಯೋಗಕ್ಕೆ ಬೇಲಿ ಹಾಕಿಕೊಳ್ಳಲು ಸಾಧ್ಯವೇ?

-


4 MAY 2023 AT 1:35

ಆರಿಸಲಾಗದ ಬೆಂಕಿ ಎಂದರೆ ಹೊಟ್ಟೆಕಿಚ್ಚು ಮಾತ್ರ.
© #ಕಾಂತೋಕ್ತಿ
ವಿಶ್ವ ಅಗ್ನಿಶಾಮಕ ದಿನದ ಶುಭಾಶಯಗಳು

-


22 APR 2023 AT 10:43

'ಭೂಮಿ ತನ್ನ ಕಕ್ಷೆಯಲ್ಲಿ ಒಂದು ಸುತ್ತು ಬಂತು ನೋಡು..' ಅಂತ ಬೆಳಗ್ಗೆ ಎದ್ದ ತಕ್ಷಣ ಹೇಳಿದರೆ ಜನರು ನಮ್ಮನ್ನು ವಿಚಿತ್ರವಾಗಿ ನೋಡುತ್ತಾರೆ. ಅದೇ 'ಸೂರ್ಯೋದಯ ಆಯಿತು ನೋಡು..' ಎಂದರೆ, 'ಸನ್‌ರೈಸ್ ಸಖತ್ ಆಗಿದೆ ಅಲ್ವಾ?' ಅಂತಾರೆ. ಈ ಜಗತ್ತೇ ಹೀಗೆ.. ಕಾಣದ ಸತ್ಯಕ್ಕಿಂತ ಕಾಣಿಸುವ ದೃಶ್ಯಕ್ಕಷ್ಟೇ ಮರುಳಾಗುತ್ತದೆ.

-


22 APR 2023 AT 9:33

ತಾಯಿ ಒಂಬತ್ತು ತಿಂಗಳು ಹೊತ್ತರೆ
ಭೂತಾಯಿ ಜೀವನಪರ್ಯಂತ ಹೊರುತ್ತಾಳೆ.

-


22 APR 2023 AT 1:22

ಭೂಮಿ ದುಂಡಗಿದೆ ಎನ್ನುವುದು ಸತ್ಯ, ಭೂಮಿ ನಿರಂತರ ತಿರುಗುತ್ತಿದೆ ಎಂಬುದೂ ಸತ್ಯ, ಭೂಮಿಯ ಸುತ್ತ ಜನರು-ಕಟ್ಟಡಗಳು ಸಹ ಇವೆ ಎನ್ನುವುದು ಕೂಡ ಸತ್ಯ. ಆದರೂ ಇದುವರೆಗೆ ಭೂಮಿಯ ಯಾವುದೇ ಭಾಗದಲ್ಲೂ ಜನರು ನೇತಾಡುತ್ತಿದ್ದಾರೆ, ಕಟ್ಟಡಗಳು ಜೋತಾಡುತ್ತಿವೆ ಎನ್ನುವಂಥ ಒಂದೇ ಒಂದು ನಿದರ್ಶನವಿಲ್ಲ. ಇಷ್ಟನ್ನು ಯೋಚಿಸಿದಾಗೆಲ್ಲ ಸೃಷ್ಟಿ ಎಷ್ಟು ವಿಚಿತ್ರ ಎನಿಸಿ ಸುಮ್ಮನೆ ದೇವರಿಗೊಮ್ಮೆ ನಮಿಸೋಣ ಅನಿಸುವುದು ಕೂಡ ಅಷ್ಟೇ ಸತ್ಯ.

-


12 FEB 2023 AT 11:31

ವಿಶ್ವ ಮತ್ತು ವಿದ್ಯಾ ವಿವಾಹವಾಗಿ
ಮನೆಯನೊಂದು ಕಟ್ಟಿಸಿ
'ವಿಶ್ವವಿದ್ಯಾನಿಲಯ' ಎಂದು ಹೆಸರಿಟ್ಟರು.

-


4 JAN 2023 AT 11:41

In life many told you, never give up. But in life, living is nothing but leaving. Sometimes you leave what you have, sometimes you leave what you are going to have. At the end we leave everything, that is the ultimate truth of life. But how many people told you about 'art of leaving'?

-


Fetching Ravikantha Kundapura Quotes